ಲಿನಕ್ಸ್ ಹಬ್ಬ ಬೆಂಗಳೂರಿನಲ್ಲಿ. ಆಚರಿಸೋಣವೆ?
ಹೌದು, ಎಲ್ಲರಿಗೂ ಲಿನಕ್ಸ್ ನ ಔತಣ ಬಡಿಸೋ ಆಸೆ. ಲಿನಕ್ಸ್ ಕನ್ನಡಿಗರಿಗೆ ಹತ್ತಿರ ಆಗಬೇಕು. ಅದನ್ನ ಉಪಯೋಗಿಸೋದು ಸುಲಭ ಆಗಬೇಕು, ನಮ್ಮಲ್ಲಿರೋ ಸಂದೇಹಗಳನ್ನ ನಿವಾರಿಸುವುದಾಗಬೇಕು, ಗ್ನೂ/ಲಿನಕ್ಸ್ ನ ಸ್ವಾತಂತ್ರ್ಯವನ್ನ ಎಲ್ಲರೂ ಮೆಲ್ಲಬೇಕು ಅನ್ನೋದು ನಮ್ಮ ಆಶಯ.
ಸಂಪದಿಗರಿಗೆ, ಲಿನಕ್ಸ್ ಆಸಕ್ತರಿಗೆ ಇಂತಹ ಅವಕಾಶವೊಂದನ್ನು ನೀಡುವ ಉತ್ಸಾಹ ನಮ್ಮದು. ಸಂಪದ ಫೌಂಡೇಶನ್ ವತಿಯಿಂದ ಈ ಕ್ರಾರ್ಯಕ್ರಮ - ಇಂಥದ್ದೊಂದು ಮೊದಲನೆಯದು! ನೀವೂ ಒಂದ್ ಕೈ ಸೇರಿಸ್ತೀರಲ್ಲ?
ಇದಕ್ಕಾಗಿ, ಮುಂದಿನ ತಿಂಗಳು "ಗ್ನೂ/ಲಿನಕ್ಸ್ ಇನ್ಸ್ಟಾಲ್ ಫೆಸ್ಟ್ " (Gnu/Linux Install Fest) ಮಾಡೋಣ ಅಂತ. ಈ ಆಲೋಚನೆಯ ಬಗ್ಗೆ ಚರ್ಚೆ ನಡೆಸುತ್ತ ಒಂದು ಕಾರ್ಯಕ್ರಮದ ರೂಪುರೇಷೆ ತಯಾರಿಸಿದ್ದೀವಿ. ಇನ್ಸ್ಟಾಲ್ ಫೆಸ್ಟ್ , ಲಿನಕ್ಸ್ ಇನ್ಸ್ಟಾಲ್ ಮಾಡೋದರ ಜೊತೆಗೆ , ಹೇಗೆ ಕನ್ನಡವನ್ನ ಲಿನಕ್ಸ್ ನಲ್ಲಿ ಬಳಸೋದು ಅನ್ನೋದನ್ನ ಪ್ರಮುಖವಾಗಿ ನಿಮ್ಮ ಮುಂದಿಡುವ ಪ್ರಯತ್ನ. ಈ ಕಾರ್ಯಕ್ರಮದ ರೂಪುರೇಷೆಗಳನ್ನ ಸಂಪದದ ವಿಕಿ ಪುಟದಲ್ಲಿ ಅಪ್ಡೇಟ್ ಮಾಡ್ತಾ ಇದ್ದೇವೆ. ನೀವೂ ಒಮ್ಮೆ ಕಣ್ಣು ಹಾಯಿಸಿ read more »