ಸಂಪದದಲ್ಲಿ ಲಿನಕ್ಸ್ ಕುರಿತ ಲೇಖನಗಳು

ಇತ್ತೀಚೆಗೆ ಸಂಪದದಲ್ಲಿ ಓಂ ಶಿವಪ್ರಕಾಶ್ ಲಿನಕ್ಸ್ ಕುರಿತು ಕೆಲವು ಲೇಖನಗಳನ್ನು ಬರೆಯತೊಡಗಿದ್ದಾರೆ. ಹೆಚ್ಚು ತಾಂತ್ರಿಕವಲ್ಲದೆ ಸರಳವಾಗಿರುವ ಲೇಖನಗಳನ್ನು ಓದಿ ನೀವೂ ಲಿನಕ್ಸ್ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಲಿನಕ್ಸ್ ಬಹಳಷ್ಟು ಜನರಿಗೆ ಕಬ್ಬಿಣದ ಕಡಲೆ. ಆದ್ರೆ ಲಿನಕ್ಸ ಅನ್ನ ಉಪಯೋಗಿಸ್ಲಿಕ್ಕೆ ಒಮ್ಮೆ ಶುರು ಮಾಡಿ ನೋಡಿ. ಪ್ರಶ್ನೆಗಳಿವೆಯೆ? ಸಂಪದಕ್ಕೆ ಒಂದು ಚರ್ಚೆಯ ವಿಷಯವನ್ನ ಸೇರಿಸಿ. ನಿಮಗೆ ಅರ್ಥವಾಗುವ ಹಾಗೆ, ಲಿನಕ್ಸ್ ಉಪಯೋಗದ ಬಗ್ಗೆ ತಿಳಿಸುವ.

ಲಿನಕ್ಸಾಯಣ ನಿಮ್ಮಲ್ಲಿಗೆ ಲಿನಕ್ಸಿನ ಎಷ್ಟೋ ವಿಷಯಗಳನ್ನ ಕನ್ನಡದಲ್ಲಿ ತರುವ ಒಂದು ಪುಟ್ಟ ಪ್ರಯತ್ನ.

ಲಿನಕ್ಸ್ ಕಲಿಯೋದು ತುಂಬಾ ಸುಲಭ, ಆದ್ರೇ ಇಂಟರ್ನೆಟ್ ಸಂಪರ್ಕ ಮತ್ತು ಲಿನಕ್ಸ್ ತಿಳಿದವರ ಅಭಾವ ನಿಮ್ಮನ್ನ ಅದರಿಂದ ದೂರ ಇಡ್ತಾನೇ ಬರ್ತಿದೆ. ಲಿನಕ್ಸ ನಲ್ಲಿ ಜಾದೂ ಮಾಡ್ಬಹುದು. ನಿಮಗೆ ಯಾವ್ ತಂತ್ರಾಂಶ ಬೇಕಿದೆಯೋ ಕೇಳಿ ನೋಡಿ, ತಟ್ಟನೆ ನಿಮ್ಮೆದುರಿಗೆ ತಂದಿಡತ್ತೆ "ಪೈರಸಿ ಭೂತ" ದಿಂದ ಮುಕ್ತವಾದ ಉತ್ತರಗಳನ್ನ. ಲಿನಕ್ಸ್ ಕಿರಿ ಕಿರಿ ಅನ್ನಿಸ್ತಿದೆಯೆ? ೨೪ ತಾಸು ಲಿನಕ್ಸ್ ನೊಂದಿಗೆ ಕಳೆದು ನಂತರ ತಿಳಿಸಿ. ನಿಮಗೆ ಕಿರಿ ಕಿರಿ ಅನ್ನಿಸಿದ್ದು ನಿಮಗೆ ತಂತ್ರಾಂಶ ಪ್ರಪಂಚದ ದರ್ಶನ ಮಾಡ್ಸಿದ್ರೂ ಮಾಡಿಸ್ಬಹುದು.

ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ ಮಾಡಿ.